ಉಪನ್ಯಾಸಕ H,M,ನಾಗಲೀಕರ ಗೆ ಒಲಿದು ಬಂದ ರಾಜ್ಯಮಟ್ಟದ ಬಸವರತ್ನ ಪ್ರಶಸ್ತಿ.

ಉಪನ್ಯಾಸಕ H,M,ನಾಗಲೀಕರ ಗೆ ಒಲಿದು ಬಂದ ರಾಜ್ಯಮಟ್ಟದ ಬಸವರತ್ನ ಪ್ರಶಸ್ತಿ. ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಕೊಡಮಾಡಲ್ಪಡುವ ರಾಜ್ಯಮಟ್ಟದ ಬಸವರತ್ನ ಪ್ರಶಸ್ತಿಗೆ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಹುಚ್ಚೇಶ ನಾಗಲೀಕರ ಆಯ್ಕೆಯಾಗಿದ್ದಾರೆ. ರವಿವಾರ ಬೆಳಿಗ್ಗೆ 10:30 ಗಂಟೆಗೆ ಕಲಬುರಗಿಯ ರಂಗಾಯಣ ಸಭಾ ಭವನದಲ್ಲಿ ನಡೆದ ತ್ರಿರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕಲಬುರಗಿಯ ಗುಲಬರ್ಗಾ ವಿ,ವಿ,ಯ ಕುಲಸಚಿವರಾಗಿರುವ ಪ್ರೊ,ರಮೇಶ ಲಂಡನ್ಕರ್ ರವರು ನಾಗಲೀಕರರವರಿಗೆ ಬಸವರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಬೇಲೂರಿನ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿಗಳಾಗಿರುವ ಶ್ರೀ ಪಂಚಾಕ್ಷರಿ ಸ್ವಾಮೀಜಿಗಳು ವಹಿಸಿದ್ದರು. ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಡಾ,ಬಸವರಾಜ ಕೊನೇಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಕೇಂದ್ರಸಾಹಿತ್ಯ ಅಕಾಡೆಮಿಯ ಸದಸ್ಯರಾಗಿರುವ ಡಾ,ಜಯದೇವಿ ಗಾಯಕವಾಡ್,ಬುದ್ದ,ಬಸವ,ಅಂಬೇಡ್ಕರರ ಬಗ್ಗೆ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಸಿರಿಗನ್ನಡ ವೇದಿಕೆ ಜಿಲ್ಲಾಘಟಕದ ಜಿಲ್ಲಾಧ್ಯಕ್ಷರಾಗಿರುವ ಡಾ.ಗವಿಸಿದ್ದಪ್ಪ ಪಾಟೀಲ ವಹಿಸಿದ್ದರು. ವರದಿ,,,ಸುರೇಶ ಬಳಗಾನೂರು.

Jun 1, 2025 - 20:27
 0  35
ಉಪನ್ಯಾಸಕ H,M,ನಾಗಲೀಕರ ಗೆ ಒಲಿದು ಬಂದ ರಾಜ್ಯಮಟ್ಟದ ಬಸವರತ್ನ ಪ್ರಶಸ್ತಿ.

What's Your Reaction?

like

dislike

love

funny

angry

sad

wow