ಬಳಗಾನೂರ ಪಟ್ಟಣ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧ : ಶಿವಕುಮಾರ್ ನಾಯಕ್
ಮಸ್ಕಿ, ಫೆ 10: ಮಂಗಳವಾರ ತಾಲೂಕಿನ ಬಳಗಾನೂರ ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆ ಶಿವಕುಮಾರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಟ್ಟಣ ಪಂಚಾಯಿತಿಗೆ ಒಳಪಡುವ ಎಲ್ಲಾ ಗ್ರಾಮ ಮತ್ತು ವಾರ್ಡ್ ಗಳ ಅಭಿವೃದ್ಧಿಗೆ ಸರಕಾರದ ಯೋಜನೆಗಳ ಜೊತೆಗೆ ಪಟ್ಟಣ ಪಂಚಾಯತಿಯ ಎಲ್ಲಾ ಸದಸ್ಯರು ಗಳೊಂದಿಗೆ ಚರ್ಚಿಸಿ, ಕುಡಿಯುವ ನೀರು, ಶೌಚಾಲಯ, ನಿವೇಶನ, ಕರ ವಸಲಿ, ಹಕ್ಕು ಪತ್ರ ಸೇರಿದಂತೆ ಅನೇಕ ಮೂಲಭೂತ ಸೌಕರ್ಯ ಹಾಗೂ ಸಿಬ್ಬಂದಿ ಪೌರಕಾರ್ಮಿಕರ ವೇತನ ಸೇರಿದಂತೆ ಬಳಗಾನೂರು ಪಟ್ಟಣ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ನಂತರ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಅಮೇಚೂರ್ ಖೋ ಖೋ ಅಸೋಸಿಯೇಷನ್ ವತಿಯಿಂದ ಕರ್ನಾಟಕದ ಖೋ ಖೋ ತಂಡದಲ್ಲಿ ಸ್ಥಾನಪಡೆದಿದ್ದ ಬಳಗಾನೂರಿನ ಕ್ರೀಡಾಪಟು ಮೌನೇಶ ತಂದೆ ನಾಗಪ್ಪ ನಾಯಕ ರಾಷ್ಟ್ರಮಟ್ಟದ ಖೋ ಖೋ ಆಟದಲ್ಲಿ ಉತ್ತಮ ಪ್ರದರ್ಶನ ತೋರಿ ಕರ್ನಾಟಕ ತಂಡ ತಮಿಳು ನಾಡು ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದಿರುವ ಕ್ರೀಡಾಪಟು ಮೌನೇಶ ತಂದೆ ನಾಗಪ್ಪ ಇವರನ್ನು ಬಳಗಾನೂರು ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು ಸನ್ಮಾನಿಸಿ ವೈಯಕ್ತಿಕ 15 ಸಾವಿರ ರೂಪಾಯಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಗೋಪಾಲ್ ನಾಯಕ್, ಬಸವರಾಜ ಸ್ವಾಮಿ ಗುಣಾರಿ,ಮಂಜುನಾಥ,
ಮಹಿಳಾ ಸದಸ್ಯರಾದ ಶಾಂತ ಹನ್ಮಂತ ಕೊರವರ,ಸಂಗೀತಾ ಗಣೇಶ್, ಲತಾ ತಿರುಕನಗೌಡ,
ಹುಸೇನಬಾಷ ,ರಾಜಶ್ರೀ ಸಂಜಯಕುಮಾರ, ಮರಿದೇವ ಹೂಗಾ, ಸುಮಂಗಲಾ ವೀರಯ್ಯಸ್ವಾಮಿ ಗುಣಾರಿ, ಅಮರೇಶ ಸೋಮಪ್ಪ,ಎಂ.ಕುಮಾರ ಸ್ವಾಮಿ, ನಾಮ ನಿರ್ದೇಶನ ಸದಸ್ಯರು ಮಲ್ಲರಡ್ಡಿಗೌಡ s» ಚನ್ನಪ್ಪಗೌಡ ಮರಡ್ಡಿ, ಶಿವರಡ್ಡಿ ತಂ ಸಿದ್ದಪ್ಪ, ಹುಸೇನಪ್ಪ ಸೇರಿದಂತೆ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು ದರತರು.
What's Your Reaction?



