ಮಸ್ಕಿ ತಾಲೂಕ ಆಡಳಿತದ ವತಿಯಿಂದ ಪತ್ರಿಕಾ ಪ್ರಕಟಣೆ
ಮಸ್ಕಿ ತಾಲೂಕ ಆಡಳಿತದ ವತಿಯಿಂದ "ಹಸಿರು ಕ್ರಾಂತಿಯ ಹರಿಕಾರ” ಡಾ: ಬಾಬು ಜಗಜೀವನರಾಂ ರವರ 119 ನೇ ಜಯಂತಿಯನ್ನು ದಿನಾಂಕ:05/04/2026 ರಂದು ಮಸ್ಕಿ ಪಟ್ಟಣದಲ್ಲಿ ಆಚರಿಸಲು ಪೂರ್ವಭಾವಿ ಸಭೆ
ದಿನಾಂಕ:31/03/2026 ರಂದು ಬೆಳಿಗ್ಗೆ 11.30 ಗಂಟೆಗೆ ತಹಶೀಲ್ದಾರ ಮಸ್ಕಿ ರವರ ಕಾರ್ಯಾಲಯದ ಸಭಾಂಗಣದಲ್ಲಿ ಕರೆಯಲಾಗಿದೆ. ಸದರಿ ಸಭೆಗೆ ಮಸ್ಕಿ ತಾಲೂಕಿನ ಎಲ್ಲ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮತ್ತು ಎಲ್ಲ ಪತ್ರಿಕಾ/ ದೃಶ್ಯ ಮಾಧ್ಯಮದ ಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಸಾರ್ವಜನಿಕರು ಪೂರ್ವಭಾವಿ ಸಭೆಗೆ ಹಾಜರಾಗಿ ತಮ್ಮ ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ಕೋರಲಾಗಿದೆ.
What's Your Reaction?



