ಮಸ್ಕಿ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಬೇಸಿಗೆ ಶಿಬಿರ ಕಾರ್ಯಕ್ರಮ
ಮಸ್ಕಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಸ್ಥಳೀಯ ಸಂಸ್ಥೆ ಮಸ್ಕಿ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಸ್ಕಿ ಇವರುಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಎಸ್ ಡಿ ಎಂ ಶಾಲೆಯಲ್ಲಿ ಇಂದು ಬೇಸಿಗೆ ಶಿಬಿರ ಕಾರ್ಯಕ್ರಮ ವನ್ನು ದೈಹಿಕ ಶಿಕ್ಷಕರಾದ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಗಳಾದ ಶಿವಪ್ಪ ಹಸಮಕಲ್ ರವರು ಉದ್ಘಾಟಿಸಿದರು.
ಈ ಬಾರಿ ಬೇಸಿಗೆ ಬಿಸಿಲು ಜಾಸ್ತಿ ಆಗಿದ್ದು ನೆಟ್ಟ ಗಿಡಗಳಿಗೆ ಜೂನ್ ವರೆಗೆ ನೀರಿನ ಅವಶ್ಯಕತೆ ಸಲುವಾಗಿ ನಮ್ಮ ಸಂಸ್ಥೆಯ ಯಿಂದ ನೀರಿನ ಸೇವೆ ಮಾಡಬೇಕು ಗಿಡಗಳನ್ನು ಉಳಿಸಲು ನಮ್ಮ ಸಂಸ್ಥೆಯ ಸದಸ್ಯರುಗಳು, ಪದಾಧಿಕಾರಿಗಳು , ವಿದ್ಯಾರ್ಥಿಗಳ ಪಾಲಕರು,ಹಾಗೂ ಕುಟುಂಬದ ಸದಸ್ಯರ ಜನ್ಮದಿನವನ್ನು ಗಿಡಗಳಿಗೆ ನೀರು ಹಾಕುವುದರ ಮೂಲಕ ಪರಿಸರ ಸಂರಕ್ಷಣೆ ಮಾಡಲು ಮನಸು ಮಾಡಬೇಕು ಎಂದು ಮಲ್ಲಿಕಾರ್ಜುನ ನಾಯಿನೇಗಿಲಿ ರವರು ಮನವಿ ಮಾಡಿದರು.
ಇದರ ಅಂಗವಾಗಿ ರೈತರ ಗದ್ದೆಗಳಿಗೆ ಹೋಗಿ ಮಕ್ಕಳು ಸಂಭ್ರಮ ಪಟ್ಟರು.
What's Your Reaction?



