ಹೊಸ ಸಿನಿಮಾ | ಮಾರ್ಚ್ 27ಕ್ಕೆ 'ಯಾವ ಮೋಹನ ಮುರಳಿ ಕರೆಯಿತು' ಬಿಡುಗಡೆ

ಮನುಷ್ಯ ಪ್ರಾಣಿ ಬಾಂಧವ್ಯ ಸಾರುವ ಸಿನಿಮಾ ನಾಳೆ 27 ಶುಕ್ರವಾರ ಬೆಳಿಗ್ಗೆ 1ಗಂಟೆ ಗೆ ಮಸ್ಕಿ ಶ್ರೀ ಶರಣಬಸವೇಶ್ವರ ಚಿತ್ರಮಂದಿರದಲ್ಲಿ( ಚಲನಚಿತ್ರ ಪ್ರದರ್ಶನ)ರಿಲೀಸ್

Mar 26, 2026 - 19:06
 0  2
ಹೊಸ ಸಿನಿಮಾ | ಮಾರ್ಚ್ 27ಕ್ಕೆ 'ಯಾವ ಮೋಹನ ಮುರಳಿ ಕರೆಯಿತು' ಬಿಡುಗಡೆ
ವರದಿ ✍️ಎಸ್ ನಜೀರ್ ಮಸ್ಕಿ

ಮನುಷ್ಯ ಮತ್ತು ಪ್ರಾಣಿನ ಬಾಂಧವ್ಯ ಸಾರುವ ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಬಂದಿವೆ ಹಾಗೂ ಬರುತ್ತಿವೆ. ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777', ಶಿವರಾಜ್ ಕೆ.ಆರ್.ಪೇಟೆ ನಟಿಸಿರುವ 'ನಾನು ಮತ್ತು ಗುಂಡ' ಭಾಗ 1, 2, “ನಾಯಿ ಇದೆ ಎಚ್ಚರಿಕೆ' ತೆರೆಕಂಡು ಗಮನಸೆಳೆದಿವೆ. ಇದೀಗ ಕನ್ನಡದಲ್ಲಿ ಮತ್ತೊಂದು ಶ್ವಾನ ಪ್ರಧಾನ ಸಿನಿಮಾ ಮೂಡಿಬರುತ್ತಿದೆ. ಅದುವೇ 'ಯಾವ ಮೋಹನ ಮುರಳಿ ಕರೆಯಿತು'. 'ದ್ಯಾವೆ' ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ವಿಶ್ವಾಸ್‌ ಕೃಷ್ಣ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

 ಬೇಬಿ ಪ್ರಕೃತಿ ಶರಣ್, ಮಾಧವನ್, ಪಟೇಲ್ ವರುಣ್ ರಾಜ್, ಸ್ವಪ್ಪಾ ಶೆಟ್ಟಿಗಾರ್ ಕಲಾಬಳಗದಲ್ಲಿದ್ದು, ಇದೇ ಶುಕ್ರವಾರ (ಮಾ.27) ಸಿನಿಮಾ ರಿಲೀಸ್‌ ಆಗುತ್ತಿದೆ. ವಿಶ್ವಾಸ್ ಕೃಷ್ಣ, 'ಕಾಲು ಸ್ವಾಧೀನ ಕಳೆದುಕೊಂಡಿರುವ ಬಾಲಕಿಗೆ ಆಶ್ರಮದಲ್ಲಿ ನಾಯಿ ಸಿಗುತ್ತದೆ. ಆ ಬಳಿಕ ಇಬ್ಬರ ನಡುವಿನ ಭಾವನಾತ್ಮಕ ಕಥೆ ಇದು. ಚಿತ್ರದಲ್ಲಿ ಮನಸ್ಸಿಗೆ ಘಾಸಿಗೊಳಿಸುವ ಕೆಲ ಘಟನೆಗಳು ನಡೆಯುತ್ತವೆ. ಅದಕ್ಕಾಗಿ 'ಯಾವ ಮೋಹನ ಮುರಳಿ ಕರೆಯಿತು' ಎಂಬ ಶೀರ್ಷಿಕೆ ಸೂಕ್ತ ಎಂದು ಇಟ್ಟಿದ್ದೇವೆ. ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಪಟು ಬೇಬಿ ಪ್ರಕೃತಿ ಶರಣ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮಲೆನಾಡಿನ ಹಸಿರು ವಾತಾವರಣದಲ್ಲಿ ನಡೆಯುವ ಕಥೆ. ಹಾಗಾಗಿ, ಸಾಗರದ ಕಾರ್ಗಲ್ ಬಳಿ 30 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ' ಎಂದು ಮಾಹಿತಿ ನೀಡಿದರು.

ರಾಕಿ- ರಾಣಾ

'ಯಾವ ಮೋಹನ ಮುರಳಿ ಕರೆಯಿತು' ಚಿತ್ರದಲ್ಲಿ 'ರಾಕಿ ಮತ್ತು ರಾಣಾ' ಎಂಬ ಎರಡು ಶ್ವಾನಗಳು ಕಾಣಿಸಿಕೊಂಡಿವೆ. ಶ್ವಾನವನ್ನು ಕ್ಯಾಮರಾ ಮುಂದೆ ನಿಲ್ಲಿಸುವ ಸವಾಲಿನ ಬಗ್ಗೆ, 'ಮೊದಲಿಗೆ ರಾಕಿ ಹೆಸರಿನ ನಾಯಿ ನಟಿಸಿತ್ತು. ಆದರೆ, ದುರದೃಷ್ಟವಶಾತ್, ಅದು ತೀರಿ ಹೋಯಿತು. ಆಗ ಕೈಮ್ಯಾಕ್ಸ್ ಮಾತ್ರ ಬಾಕಿಯಿತ್ತು. ನಾವೇ ಬೆಳೆಸಿದ್ದ ರಾಣಾ ಹೆಸರಿನ ನಾಯಿಗೆ ಒಂದು ತಿಂಗಳ ಕಾಲ ತರಬೇತಿ ನೀಡಿ, ಕ್ಯಾಮರಾ ಮುಂದೆ ತಂದೆವು. ಶ್ವಾನಗಳನ್ನು ಕ್ಯಾಮರಾ ಮುಂದೆ ನಿಲ್ಲಿಸುವುದೇ ದೊಡ್ಡ ಸವಾಲಾಗಿತ್ತು' ಎನ್ನುತ್ತಾರೆ ವಿಶ್ವಾಸ್ ಕೃಷ್ಣ.

What's Your Reaction?

like

dislike

love

funny

angry

sad

wow