ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 15ನೇ ವಾರ್ಷಿಕೋತ್ಸವ ಸಂಭ್ರಮ ಅದ್ದೂರಿ
ಮಸ್ಕಿ, ಫೆ.11.ರಂದು ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 15ನೇ ವಾರ್ಷಿಕೋತ್ಸವ ಸಂಭ್ರಮವು ಪಟ್ಟಣದ ಶಾಲೆಯ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ವೇದಿಕೆ ಆವರಣದಲ್ಲಿ ನಡೆಯಿತು.
ಬೆಳಗ್ಗೆ 9:ಗಂಟೆಗೆ ಕಾರ್ಯಕ್ರಮವು ಮಾಹಾ ಸರಸ್ವತಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ದಿವ್ಯ ಸಾನಿಧ್ಯ ವಹಿಸಿದ ಶ್ರೀ ವರರುದ್ರಮುನಿ ಶಿವಾಚಾರ್ಯ ಶ್ವಾಮಿಗಳು ಗಚ್ಚಿನ ಮಠ ಮಸ್ಕಿ ದೀಪ ಬೆಳಗುವ ಮೂಲಕ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆ ಅಧ್ಯಕ್ಷತೆ ವಹಿಸಿದ ಮಲ್ಲಿಕಾರ್ಜುನ್ ನಾಯನೇಗಲಿ ಹಾಗೂ ಅತಿಥಿ ಡಾ. ಶಿವಾನಂದ್ ನಾಯನೇಗಲಿ ಮತ್ತು ಪಾಲಕರ ಪ್ರತಿನಿಧಿಯಾಗಿ ವಿಶ್ವನಾಥ್ ಕೊಪ್ಪರದ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಶಾಲಾ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ, ಆಟ ಪಾಠದ ಜೊತೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದು ಕೊಟ್ಟಿರುವುದರ ಬಗ್ಗೆ ಹಿತನುದಿಗಳು ನುಡಿದರು.
ನಂತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಳು ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಶಾಲಾ ಕಾರ್ಯದರ್ಶಿ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಚಂದ್ರಶೇಖರ್ ಹೂವಿನ ಬಾವಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಗಳು ಚನ್ನಬಸವರಾಜ್ ಮೇಟಿ, ಶ್ರೀಮತಿ ಇಂದಿರಾ ಬಿ ಪಾಟೀಲ್ ಶ್ರೀಮತಿ ಇಂದಿರಾ ಬಿ ಪಾಟೀಲ್ ಗುರುಗಳು ಎಸ್ ಡಿ ಎಂ ಪ್ರೌಢಶಾಲೆ, ಸಂಸ್ಥೆಯ ಸದಸ್ಯರು ಶಿಕ್ಷಕರು ಪಾಲಕರು ಉಪಸ್ಥಿತರಿದ್ದರು.
What's Your Reaction?



