ಆಟದ ಜೊತೆಗೆ ಪಾಠದಲ್ಲೂ ಗಮನಹರಿಸಿದರೆ ಭವಿಷ್ಯ ಉಜ್ವಲ ||ಎಮ್,ಡಿ,ಆಲಮ್ ಭಾಷಾ ಹಣಿಗಿ
ಮಸ್ಕಿ, ಫೆ7:ಆಟದ ಜೊತೆಗೆ ಪಾಠದಕಡೆಗೂ ಗಮನಹರಿಸಿದರೆ ಉನ್ನತಸ್ಥಾನ ಪಡೆದು ಜೀವನ ಉಜ್ವಲ ವಾಗುತ್ತದೆಂದು ಮನೆಪಾಠಶಾಲೆಯ ಶಿಕ್ಷಕರಾದ ಎಮ್,ಡಿ,ಆಲಮ್ ಭಾಷಾ ಹಣಿಗಿ ಕಿವಿಮಾತುಗಳನ್ನು ಹೇಳಿದರು.
ತುಮಕೂರಿನಲ್ಲಿ ಜನವರಿ 31 ನೇ ತಾರೀಕಿನಿಂದ ಫೆಬ್ರುವರಿ 3 ನೇ ತಾರೀಕಿನ ತನಕ ನಡೆದ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಅಮೇಚೂರ್ ಖೋ ಖೋ ಅಸೋಸಿಯೇಷನ್ ವತಿಯಿಂದ ಕರ್ನಾಟಕದ ಖೋ ಖೋ ತಂಡದಲ್ಲಿ ಸ್ಥಾನಪಡೆದಿದ್ದ ಬಳಗಾನೂರಿನ ಕ್ರೀಡಾಪಟು ಮೌನೇಶ ತಂದೆ ನಾಗಪ್ಪ ನಾಯಕ ರಾಷ್ಟ್ರಮಟ್ಟದ ಖೋ ಖೋ ಆಟದಲ್ಲಿ ಉತ್ತಮ ಪ್ರದರ್ಶನ ತೋರಿ ಕರ್ನಾಟಕ ತಂಡ ತಮಿಳು ನಾಡು ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆಯಲು ಕಾರಣವಾಗಿದ್ದಾನೆ.
ಅದರ ಪ್ರಯುಕ್ತ ಗುರುವಾರ ಸಂಜೆ ಬಳಗಾನೂರಿನ ಎಮ್,ಡಿ,ಆಲಮ್ ಭಾಷಾ ಮನೆಪಾಠಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ
ಶ್ರೀಮತಿ ಇರ್ಫಾನ್ ಬೇಗಂ ಮತ್ತು ಎಮ್,ಡಿ,ಆಲಮ್ ಭಾಷಾ ಹಣಿಗಿ ದಂಪತಿಗಳು ಸನ್ಮಾನ ಮಾಡಿ ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಯಾದಗಿರಿ ಮಾತನಾಡಿ ಮೌನೇಶ ನಮ್ಮ ಶಾಲೆಯಲ್ಲಿ ಆರನೆ ತರಗತಿಗೆ ಸೇರಿದಾಗಿನಿಂದ ಪಿ,ಯು,ಸಿ ಯವರೆಗೆ ಆಟ,ಪಾಟಗಳಲ್ಲಿ ಚುರುಕಿನಿಂದ ಭಾಗವಹಿಸುತ್ತಿದ್ದ. ಯಾವುದೇ ದುಷ್ಚಟಗಳಿಲ್ಲದೆ ದೈಹಿಕ ಕಸರತ್ತು ನಡೆಸಿ ನಮ್ಮ ನಿರ್ದೇಶನಗಳನ್ನು ಸರಿಯಾಗಿ ಗ್ರಹಿಸಿ ಅನುಸರಿಸಿ ಈಗ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವುದು ನಮ್ಮ ಊರಿಗೆ,ಪಾಲಕರಿಗೆ,ಶಾಲೆಗೆ ಹೆಮ್ಮೆಯ ವಿಷಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕ್ರೀಡಾಪಟು ಮೌನೇಶ ನಾಯಕ ತನ್ನ ಕ್ರೀಡಾ ಪಯಣದ ಅನುಭವಗಳನ್ನು ಹಂಚಿಕೊಂಡನು.
ಬಳಗಾನೂರು ಪಟ್ಟಣ ಪಂಚಾಯ್ತಿಯ ಹಿರಿಯ ಸದಸ್ಯ ಹನುಮೇಶ ಹೂಗಾರ್,ಪಟ್ಟಣ ಪಂಚಾಯ್ತಿಯ ಉಪಾಧ್ಯಕ್ಷ ಮಂಜುನಾಥ ಸ್ವಾಮಿ,ದೇವಪ್ಪ ಉಪ್ಪಾರ್ ,ಶಿವಶರಣ (ದೊಡ್ಲಾ) ಉಪ್ಪಾರ,ಮೌನೇಶ ನಾಯಕ,ಕಾಳಪ್ಪ ನಾಯಕ,ಅಮರೇಶ್ ಗಚ್ಚಿನಮನಿ, ಶಿವಕುಮಾರ ನಾಯಕ, ಕಾರ್ತೀಕ,ಹೈಮದ್,ವರದಿಗಾರ ಹನುಮೇಶ ಕಮ್ಮಾರ್,ಉಪನ್ಯಾಸಕ ಸುರೇಶ ಬಳಗಾನೂರು ಮೌನೇಶನಿಗೆ ಸನ್ಮಾನಿಸಿ ಅಂತರಾಷ್ಟ್ರೀಯ ಮಟ್ಟಕ್ಕೂ ಆಯ್ಕೆಯಾಗಿ ಕೀರ್ತಿವಂತನಾಗು ಎಂದು ಹರಸಿದರು.
What's Your Reaction?



