ಸಮುದಾಯ ಭವನ ಕಟ್ಟಡ ಕಾಮಗಾರಿ ಕಳಪೆ ಆರೋಪ
ಗುತ್ತೇದಾರನ ಪರವಾನಿಗೆ ಕಪ್ಪು ಕಟ್ಟಿಗೆ ಸೇರಿಸಲು ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಜಿಲಾನಿ ಪಾಷಾ ಒತ್ತಾಯ
ಮಸ್ಕಿ ತಾಲೂಕಿನ ಮುಸ್ಲಿಕರ್‌ಲಕುಂಟಿ ಗ್ರಾಮದಲ್ಲಿ 50 ಲಕ್ಷದ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಮಯದಾಯ ಭವನ ಕಟ್ಟಡದ ಕಾಮಗಾರಿ ಕಳಪೆ ಗುಣಮಟ್ಟದಿಂದ ಭವನ ಸಂಪೂರ್ಣ ಕೂಡಿದೆ ಎಂದು ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಜಿಲಾನಿ ಪಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಮುಸ್ಲಿಕರ್‌ಲಕುಂಟಿ ಗ್ರಾಮದಲ್ಲಿ 2024-25ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ ನಿರ್ವಹಣೆಯ ಹೊಣೆ ನೀಡಲಾಗಿದೆ.
ಕೆಆರ್‌ಐಡಿಎಲ್‌ನವರು ಪತ್ರಕರ್ತರೊಬ್ಬರಿಗೆ ಭವನ ನಿರ್ಮಾಣವನ್ನು ಉಪಗುತ್ತಿಗೆ ನೀಡಿದ್ದರಿಂದ ಕಟ್ಟಡಕ್ಕೆ ಕಳಪೆ ಸಾಮಾಗ್ರಿಗಳಾದ ಇಟ್ಟಿಗೆ, ಮಣ್ಣು ಮಿಶ್ರಿತ ಮರಳು ಹಾಗೂ 35-40% ಗ್ರೇಡ್ ಸಿಮೆಂಟ್ ಬಳಸುತ್ತಿದ್ದಾರೆ ಎಂದು ಗ್ರಾಮಸ್ಥರು ಕೊಡ ವಿಷಾದ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸಮುದಾಯ ಭವನ ಕಟ್ಟಡದ ಮೇಲ್ಪಾವಣಿ ಹಾಕಲಾಗಿದೆ. ಆದರೆ ಕ್ಯೂರಿಂಗ್ ಇಲ್ಲದೆ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ.
ಆದ್ದರಿಂದ ಮನಸೋ ಇಚ್ಛೆ ಕಾಮಗಾರಿ ಮಾಡುತ್ತಿರುವ ಗುತ್ತೇದಾರರ ಪರವಾಗಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಲ್ ಪಾವತಿ ತಡೆದು ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳ ಕರವೇ ಸ್ವಾಭಿಮಾನಿ ಬಣದ ಲಿಂಗಸಗೂರು ಅಧ್ಯಕ್ಷ ಜಿಲಾನಿ ಪಾಷಾ ಆಗ್ರಹಿಸಿದ್ದಾರೆ.
What's Your Reaction?



