ರಾಜ್ಯಾದ್ಯಂತ ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣಕ್ಕೆ ಸರಕಾರ ಸಿದ್ಧತೆ || ಶಾಸಕ ತುರುವಿಹಾಳ
ಮಸ್ಕಿ ತಾಲೂಕು ತಹಸೀಲ್ದಾರ್ ಕಾರ್ಯಾಲಯದಲ್ಲಿ ಕಛೇರಿ ಸರ್ವೇ ಮತ್ತು ನೋಂದಣಿ ಇಲಾಖೆಗಳ ಡಿಜಿಟಲೀಕರಣ ಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಶಾಸಕ ಆರ್ ಬಸನಗೌಡ ತುರುವಿಹಾಳ ಅವರು ಮಾನ್ಯ ಕೃಷ್ಣ ಬೈರೇಗೌಡ ಕಂದಾಯ ಇಲಾಖೆ ಸಚಿವರು ರೈತರ ಅನುಕೂಲಕ್ಕಾಗಿ ಕೈಗೊಂಡಿರುವ ಯೋಜನೆ ಹಳೆಯ ದುಸ್ತುತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳನ್ನಾಗಿ ಪರಿವರ್ತನೆ, ಭೂ ದಾಖಲೆಗಳು ರೆಕಾರ್ಡ್ ರೂಮ್ ಗಳಿಂದ ಪಡೆದುಕೊಳ್ಳುವ ಇರುವ ತೊಂದರೆಗಳ ನಿವಾರಣೆ, ಹಳೆಯ ದಾಖಲೆಗಳು ಸಂರಕ್ಷಣೆ ಹಾಗೂ ಹಾಳಾಗಲು ತಿದ್ದಲು ಅಸಾಧ್ಯದ ಜೊತೆಗೆ ನೇರವಾಗಿ ನೀವೇ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳುವ ಸೌಲಭ್ಯ ನಿಮ್ಮ ದಾಖಲೆಗಳನ್ನು ನಿಮ್ಮ ಕೈಗೆ ತಲುಪಿಸುವ ಯೋಜನೆ ಇದಾಗಿದೆ
ಆಸ್ತಿ ದಾಖಲೆ ತಿದ್ದುವ ಮೂಲಕ ನಡೆಯುತ್ತಿರುವ ವಂಚನೆ, ಪೋರ್ಜರಿಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ ರಾಜ್ಯಾದ್ಯಂತ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಇದರಿಂದ ಸಾರ್ವಜನಿಕರು ಅವಶ್ಯಕ ಕಂದಾಯ ದಾಖಲೆಗಳಿಗಾಗಿ ತಾಲೂಕು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಎಲ್ಲ ರೆಕಾರ್ಡ್ ರೂಂಗಳನ್ನು ಡಿಜಿಟಲೈಜ್ ಮಾಡಿ ಭೂ ದಾಖಲೆಗಳೊಂದಿಗೆ ಸಂಬಂಧಪಟ್ಟ ಮಾಲೀಕರ ಆಧಾರ್ ಜೋಡಣೆ ಕಾರ್ಯವನ್ನು ಜನವರಿಯಿಂದ ಆರಂಭಿಸಲಾಗುತ್ತಿದೆ.
ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದಡಿ ಕಂದಾಯ ಇಲಾಖೆ ಕೈಗೆತ್ತಿಕೊಂಡಿರುವ ಈ ಯೋಜನೆಯಡಿ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ 236 ತಾಲೂಕು ಕಚೇರಿಗಳ ರೆಕಾರ್ಡ್ ರೂಂಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. 20 ವರ್ಷಗಳ ಹಿಂದೆ ಚಾಲನೆ ಪಡೆದುಕೊಂಡಿದ್ದ 'ಭೂಮಿ' ಯೋಜನೆಯ ಮುಂದುವರಿದ ಭಾಗವಾಗಿದೆ. ಈ ಡಿಜಿಟಲೀಕರಣದಿಂದ ಕಂದಾಯ ಕಚೇರಿಗಳ ಮೇಲಿನ ಒತ್ತಡ ತಗ್ಗಲಿದ್ದು, ಜನಸಾಮಾನ್ಯರಿಗೆ ಅವಶ್ಯಕ ಆಸ್ತಿ ದಾಖಲೆಗಳು ಆನ್‌ಲೈನ್‌ನಲ್ಲಿ ಸಿಗಲಿವೆ. ರೆಕಾರ್ಡ್ ರೂಂಗಳನ್ನು ಡಿಜಿಟಲೈಜ್ ಮಾಡಿ ಭೂ ದಾಖಲೆಗಳೊಂದಿಗೆ ಸಂಬಂಧಪಟ್ಟ ಮಾಲೀಕರ ಆಧಾರ್ ಜೋಡಣೆ ಕಾರ್ಯವನ್ನು ಜನವರಿಯಿಂದ ಆಂದೋಲನ ರೂಪದಲ್ಲಿ ಆರಂಭಿಸಲಾಗುತ್ತಿದೆ.
ಆಸ್ತಿ ದಾಖಲೆ ತಿದ್ದುವ ಮೂಲಕ ನಡೆಯುತ್ತಿರುವ ವಂಚನೆ, ಪೋರ್ಜರಿಗಳಿಗೆ ಸಂಪೂರ್ಣ ಕಡಿವಾಣ ಹಾಕಿ, ಸಾರ್ವಜನಿಕರು ಅವಶ್ಯಕ ಕಂದಾಯ ದಾಖಲೆಗಳಿಗಾಗಿ ತಾಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯಾದ್ಯಂತ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಸರಕಾರ ಕೈಗೆತ್ತಿಕೊಂಡಿದೆ ಎಂದು ಹೇಳಿದರು.
ನಂತರ ಮಾತನಾಡಿದ ತಹಸಿಲ್ದಾರ್ ಮಲ್ಲಪ್ಪ ಯರಗೋಳ ರೈತರ ಬೆರಳ ತುದಿಯಲ್ಲಿ ಭೂ ದಾಖಲೆಗಳು ಡಿಜಿಟಲೀಕರಣ ಮೂಲಕ ಅನುಕೂಲವಾಗಲಿದೆ. ಡಿಜಿಟಲೀಕರಣ ಇದೀಗ ಭೂ ಸುರಕ್ಷಾ ಯೋಜನೆ ಮೂಲಕ ನೂರಾರು ವರ್ಷಗಳ ದಾಖಲೆ ಪತ್ರಗಳನ್ನು ಶಾಶ್ವತವಾಗಿ ಉಳಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಲು ಅವಕಾಶವಿರದಂತೆ ಗಣಕೀಕರಣ ಮಾಡಲು ಕಂದಾಯ ಇಲಾಖೆ ಮುಂದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮದ ರೈತರು ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ ಸೇರಿದಂತೆ ಉಪಸ್ಥಿತರಿದ್ದರು.
What's Your Reaction?






