ಬಳಗಾನೂರಿನ ದಕ್ಷ ಆರಕ್ಷಕ ರೇವಣಸಿದ್ದಪ್ಪರಿಗೆ ಮುಖ್ಯಮಂತ್ರಿ ಪದಕ ಪ್ರಧಾನ.

ಬಳಗಾನೂರಿನ ದಕ್ಷ ಆರಕ್ಷಕ ರೇವಣಸಿದ್ದಪ್ಪರಿಗೆ ಮುಖ್ಯಮಂತ್ರಿ ಪದಕ ಪ್ರಧಾನ. ಬಳಗಾನೂರಿನ ದಕ್ಷ ಆರಕ್ಷಕ ರೇವಣಸಿದ್ದಪ್ಪರವರ ಪ್ರಾಮಾಣಿಕ ಮತ್ತು ಸಮರ್ಪಣಾಮನೋಭಾವದಿಂದ ಕರ್ತವ್ಯ ನಿರ್ವಹಿಸುವ ‌ಪ್ರಜ್ಞೆಯನ್ನು ಪರಿಗಣಿಸಿ ಇಲಾಖೆ ಕಳೆದ ವರ್ಷವೇ ಮುಖ್ಯಮಂತ್ರಿಗಳ ಬಂಗಾರ ಪದಕಕ್ಕೆ ಆಯ್ಕೆಮಾಡಿತ್ತು. ಇವರ ಈ ಸಾಧನೆಗೆ ಬಳಗಾನೂರಿನ ಆರಕ್ಷಕ ಠಾಣೆಯ ಠಾಣಾಧಿಕಾರಿಗಳು ಆರಕ್ಷಕರು ಮತ್ತು ಪಟ್ಟಣದ ನಾಗರೀಕರು ಅಂದೇ ಶುಭಕಾಮನೆಗಳನ್ನು ತಿಳಿಸಿದ್ದರು. ನಿನ್ನೆ ಬುದವಾರ ಸಂಜೆ ಬೆಂಗಳೂರಿನ ಕೋರಮಂಗಲದ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರೇವಣಸಿದ್ದಪ್ಪರವರಿಗೆ ಮುಖ್ಯಮಂತ್ರಿಗಳು ಬಂಗಾರದ ಪದಕವನ್ನು ಪ್ರಧಾನ ಮಾಡಿದರು. ಆ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು.ಕಾನೂನು ಸುವ್ಯವಸ್ಥೆ ಮತ್ತು ಬಂಡವಾಳ ಹೂಡಿಕೆ,ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗಳಿಗೆ ಒಂದಕ್ಕೊಂದು ನೇರ ಸಂಬಂಧವಿದೆ. ನಿರುದ್ಯೋಗ ಸಮಾಜದ ಬಹು ದೊಡ್ಡ ಪಿಡುಗಾಗಿ ಬೆಳೆಯುತ್ತಿದೆ.ಇದನ್ನು ತಡೆಯಬೇಕಾದರೆ ಕಾನೂನು ಸುವ್ಯವಸ್ಥೆ ಶಾಂತಿ ಪಾಲನೆ ಉತ್ತಮವಾಗಿರಬೇಕು ಎಂದು ಕರೆಕೊಟ್ಟರು. ಮೂರು ವರ್ಷಗಳಿಂದ ವಿತರಿಸಲಾಗಿರಲಿಲ್ಲ ಈ ಬಾರಿ ಒಟ್ಟಿಗೆ ಎಲ್ಲವನ್ನೂ ವಿತರಿಸಿದ್ದೇವೆ.ಸಕಲ ಪದಕ ಪುರಸ್ಕೃತರಿಗೂ ಅಭಿನಂದನೆಗಳು. ಇತ್ತೀಚಿಗೆ ಸೈಬ‌ರ್ ಅಪರಾಧಗಳು ಅಧಿಕವಾಗುತ್ತಿವೆ.ತಂತ್ರಜ್ಞಾನವನ್ನು ಬಳಸಿಕೊಂಡು ಸೈಬ‌ರ್ ಅಪರಾಧಗಳನ್ನು ನಿಗ್ರಹಿಸಬೇಕುಎಂದರು. ಮಾದಕ ವಸ್ತು ಮುಕ್ತ ರಾಜ್ಯ ಮಾಡುವುದು ನನ್ನ ಗುರಿ.ಇದಕ್ಕಾಗಿ ಬಹಳಷ್ಟು ಶ್ರಮಿಸಬೇಕು. ಪೊಲೀಸರು ಮಾದಕ ವಸ್ತು ಜಾಲವನ್ನು ಬೇರು ಸಮೇತ ಕಿತ್ತಿ ಹಾಕಲು ದೃಡ ಸಂಕಲ್ಪಿತರಾಗಬೇಕು. ಪದಕಗಳನ್ನು ಪಡೆದವರು ಬೇರೆಯವರಿಗೆ ಮಾದರಿಯಾಗಬೇಕು. ಪದಕ ಪಡೆಯಲು ದಕ್ಷತೆ, ಪ್ರಾಮಾಣಿಕತೆಯಿಂದ ಕರ್ತವ್ಯ ನರ್ವಹಿಸಬೇಕು ಎಂದು ಹೇಳಿದರು. ಕಳೆದೆರಡು ವರ್ಷಗಳಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತಿದೆ.ಇದು ಒಳ್ಳೆಯ ಬೆಲಕವಣಿಗೆ ಇದು ಇನ್ನೂ ಕಡಿಮೆಯಾಗಬೇಕು. ಜರ್ಮನಿ ದೇಶದ ಪ್ರಧಾನಿಗಳು, ಪ್ರತಿನಿಧಿಗಳು ರಾಜ್ಯದ ಪೊಲೀಸ್‌ ಕೌಶಲ್ಯ ಮತ್ತು ಧಕ್ಷತೆಯನ್ನು ಶ್ಲಾಘಿಸಿದ್ದಾರೆ.ಇದು ಅಪಾರ ಮೆಚ್ಚುಗೆಯ ವಿಷಯ. ಪೊಲೀಸರ ಅಗತ್ಯ ಮತ್ತು ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಸದಾ ಸಿದ್ದವಿದೆ.ನಾವು ನಿರಂತರವಾಗಿ ನಿಮ್ಮ ಜೊತೆಗಿರುತ್ತೇವೆ. ಆದರೆ ಕರ್ತವ್ಯಲೋಪವನ್ನು ಮಾತ್ರ ಸಹಿಸುವುದಿಲ್ಲ.ಪೊಲೀಸ್ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಿ ಎಂದು ತಿಳಿಸಿದರು. ಗೂಂಡಾಗಿರಿ,ರೌಡಿಸಂ ಪೂರ್ಣ ಮಟ್ಟ ಹಾಕಿ.ಅಗತ್ಯ ಸಹಕಾರ, ಸವಲತ್ತುಗಳನ್ನು ಕೊಡಲು ಸರ್ಕಾರ ಸಿದ್ದವಿದೆ.ಮೊನ್ನೆಯ ಬಜೆಟ್ ನಲ್ಲಿ ಇಲಾಖೆ ಮತ್ತು ಸಿಬ್ಬಂದಿಯ ಅನುಕೂಲಕ್ಕೆ ಘೋಷಿಸಿರುವ ಎಲ್ಲವನ್ನೂ ಜಾರಿ ಮಾಡಲಾಗುವುದು ಎಂದರು. ಈ ವೇಧಿಕೆಯಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್,ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್,ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀ‌ರ್ ಅಹಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಉಪಸ್ಥಿತರಿದ್ದರು. ವರದಿ,,,ಸುರೇಶ ಬಳಗಾನೂರು.

Apr 3, 2025 - 13:57
 0  68
ಬಳಗಾನೂರಿನ ದಕ್ಷ ಆರಕ್ಷಕ ರೇವಣಸಿದ್ದಪ್ಪರಿಗೆ ಮುಖ್ಯಮಂತ್ರಿ ಪದಕ ಪ್ರಧಾನ.

What's Your Reaction?

like

dislike

love

funny

angry

sad

wow