ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ

ಮಾನ್ವಿ ತಾಲೂಕಿನ ಮುದ್ದುನಗುಡಿ ಗ್ರಾಮದ ಶಿವನಗೌಡ ಎಂಬ ಯುವಕ ಅತ್ಯಾಚಾರ ಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಮಸ್ಕಿ ತಾಲೂಕು ಘಟಕದ ವತಿಯಿಂದ ಗೃಹ ಸಚಿವರಿಗೆ ಮಸ್ಕಿ ಗ್ರೇಡ್-2 ತಹಸೀಲ್ದಾರ್ ಅಶೋಕ ಪವಾರ್ ಅವರ ಮುಖಾಂತರ ಮನವಿ ಸಲ್ಲಿಸಲಾಯಿತು.

Nov 30, -0001 - 00:00
 0  20
ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ

ನಂತರ ಮಾತನಾಡಿದ ತುರುಮಂದೆಪ್ಪ ಕಟ್ಟಿಮನಿ, ಮಾನ್ವಿ ತಾಲೂಕಿನ ಮುದ್ದನಗುಡ್ಡಿ ಗ್ರಾಮದ 2ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರವು ಇಡೀ ಮಾನವ ಕುಲವೇ ಖಂಡಿಸಬೇಕಾಗಿದೆ ಇಂತಹ ಹೀನ ಘಟನೆಯಿಂದ ಶಿಕ್ಷಕರು ಶಿಕ್ಷಣ ಇಲಾಖೆಯು ತಲೆತಗ್ಗಿಸುವಂತಾಗಿದೆ ಹಾಗಾಗಿ ಈ ಘಟನೆಗೆ ಕಾರಣರಾದ ಆರೋಪಿ ಮುದ್ದನಗುಡ್ಡಿ ಗ್ರಾಮದ ಶಿವನಗೌಡ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಸಂತ್ರಸ್ತೆಗೆ 50 ಲಕ್ಷ ಪರಿಹಾರ, ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಲ್ಲಾ ತರಹದ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವಂತೆ ಆದೇಶ ಹೊರಡಿಸಬೇಕು ಒಂದುವೇಳೆ ಈ ನಿಯಮ ಪಾಲಿಸದೆ ಇದ್ದರೆ ಅವರ ಶಾಲೆಯ ಪರವಾನಗಿ ರದ್ದುಪಡಿಸಬೇಕೆಂದು ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು.

ತುರುಮಂದೆಪ್ಪ ಕಟ್ಟಿಮನಿ, ಅಶೋಕ ಮುರಾರಿ, ಕಿರಣ ಮುರಾರಿ, ಕಾಶಿಮ ಮುರಾರಿ, ವಿಜಯಕುಮಾ‌ರ್ ಸಾಗರ ಕ್ಯಾಂಪ್, ಮೋಹನ್ ಎಂ ಮುರಾರಿ, ವಂದೇಲಪ್ಪ ಬೆಳ್ಳಿಗಿನೂರು, ಹುಸೇನಪ್ಪ, ಹೊಳಿಯಪ್ಪ, ಮೌನೇಶ ಮುದುಗಲ್ ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow