ಅಮೆರಿಕ-ಇಸ್ರೇಲ್ ಆಕ್ರಮಣ ;ಇರಾನ್ ಅಧ್ಯಕ್ಷ ಅಲಿ ಖೊವೇನಿ ಹತ್ಯೆಯನ್ನು ಸಹಿಸಿ ಕೊಳ್ಳಬೇಡಿ!:ಆರ್. ಮಾನಸಯ್ಯ
ಜಗತ್ತಿನ ನಂಬರ್ ಒನ್ ಭಯೋತ್ಪಾದಕ ರಾಜ್ಯವಾದ- ಸಾಮ್ರಾಜ್ಯಶಾಹಿ ಅಮೆರಿಕ ಹಾಗೂ ಜಿಯೋನಿಸ್ಟ್ ನರಹಂತಕ ಇಸ್ರೇಲ್ ಸೇರಿಕೊಂಡು ನಿನ್ನೆ ಇರಾನ್ ದೇಶದ ಮೇಲೆ ಆಕ್ರಮಣ ಮಾಡಿ ಇರಾನ್ ಅಧ್ಯಕ್ಷ ಅಲಿ ಖೋಮೊನಿಯವರ ಹತ್ಯೆ ಮಾಡಿದ್ದನ್ನು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(TUCI) ಕೇಂದ್ರ ಸಮಿತಿ ತೀವ್ರವಾಗಿ ಖಂಡಿಸಿದೆ.
ಹಾಗೆಯೆ,ಕೂಡಲೇ ಭಾರತ ಸರಕಾರವು ಈ ಭಯೋತ್ಪಾದಕ ಟ್ರಂಪ್ ಹಾಗೂ ಬೆಂಜಮಿನ್ ನೇತನ್ಯಾಹು ಪ್ರಭುತ್ವಗಳ ಜತೆ ಮಾಡಿಕೊಳ್ಳಲಾದ ಎಲ್ಲಾ ವಾಣಿಜ್ಯ ಹಾಗೂ ಸೈನಿಕ ಒಪ್ಪಂದಗಳನ್ನು ರದ್ದುಡಿಸಿಕೊಳ್ಳಬೇಕು. ಯುದ್ಧಕೋರ ಹಾಗೂ ಜಾಗತಿಕ ಭಯೋತ್ಪಾದನೆಯ ಮುಖ್ಯ ಪ್ರೇರಕ ಶಕ್ತಿಯಾದ, ಅಮೆರಿಕದ ಸ್ನೇಹವನ್ನು ಭಾರತ ತೊರೆಯಬೇಕು. ಈ ಮೂಲಕವೇ ಭಾರತದ ಪ್ರಧಾನಿ ವಿಶ್ವ ಸಂಸ್ಥೆಯ ಮೂಲಕ ಶಾಂತಿ ಮಾತು ಕಥೆಗೆ ಒಟ್ಟಾಯಿಸ ಬೇಕೆಂದು ಟಿಯುಸಿಐ ಆಗ್ರಹಿಸುತ್ತದೆ ಎಂದು ಆರ್. ಮಾನಸಯ್ಯ
ಟ್ರೀಡ್ ಯೂನಿಯನ ಸೆಂಟರ್ ಆಫ್ ಇಂಡಿಯಾ (TUCI)
ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಾಮಾಜಿಕ ಮಾಧ್ಯಮದಲಿ ಹಂಚಿಕೊನಂಡಿದ್ದಾರೆ.
ಪ್ರಪಂಚದ ಎಲ್ಲಾ ಸಂಪತ್ತು ಹಾಗೂ ಮಾರುಕಟ್ಟೆಯ ಮೇಲೆ ತನ್ನ ಅಧಿಪತ್ಯ ಸಾಧಿಸುವ ಗುರಿಯೊಂದಿಗೆ ಅಮೆರಿಕ ಸಾಮ್ರಾಜ್ಯಶಾಹಿಯು,ಇದುವರೆಗೆ ಲೆಕ್ಕವಿಲ್ಲದಷ್ಟು ಸಾರ್ವಭೌಮ ರಾಷ್ಟ್ರಗಳ ಮೇಲೆ ದಾಳಿ ಮಾಡಿದೆ.ಅವುಗಳ ಚುನಾಯಿತ ಸರ್ಕಾರಗಳನ್ನು ಪತನಗೊಳಿಸಿದೆ.ಆ ದೇಶದ ಅಧ್ಯಕ್ಷರನ್ನು ಕೊಂದು ಹಾಕಿದೆ. ಪ್ರಜಾಪ್ರಭುತ್ವ ಸ್ಥಾಪನೆ ಹೆಸರಲ್ಲಿ ಇರಾಕ್, ಅಪಘಾನಿಸ್ತಾನ್, ಲಿಬಿಯಾ, ಸಿರಿಯಾ, ವೆನಿಜುಲ ಈಗ ಇರಾನ್ ಮೇಲೆ ಸಾಮ್ರಾಜ್ಯಶಾಹಿಯ ದಾಳಿ ಮುಂದುವರಿದಿದೆ.
ಈ ದಾಳಿಗೆ ಈ ದೇಶಗಳ ಪ್ರಭುತ್ವಗಳು ಹಾಗೂ ದೇಶವಾಸಿಗಳು ಪ್ರತೀಕಾರ ತೀರಿಸಿಕೊಳ್ಳಬೇಕು. ಜಗತ್ತಿನ ಎಲ್ಲಾ ದೇಶಗಳ ಕಾರ್ಮಿಕ ವರ್ಗ, ಅದರಲ್ಲೂ ಅಮೆರಿಕ ದೇಶದ ಜನತೆ ಈ ಯುದ್ಧದ ವಿರುದ್ಧ ಎದ್ದು ನಿಲ್ಲ ಬೇಕು. ಹಾಗೆಯೆ,ದಮನಿತ ದೇಶಗಳ ಪರವಾಗಿ ಅದರಲ್ಲೂ ಮುಸ್ಲಿಂ ನಾಗರೀಕರ ಪರವಾಗಿ ಅಂತಾರಾಷ್ಟ್ರೀಯ ಬೆಂಬಲ ಪ್ರಕಟಿಸಬೇಕೆಂದು ಟಿಯುಸಿಐ ಕೇಂದ್ರ ಸಮಿತಿಯು ಈ ಮೂಲಕ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ.
What's Your Reaction?



