ಒಳ ಮೀಸಲಾತಿ ಧೋರಣೆಯನ್ನು ಖಂಡಿಸಿ ದಲಿತ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
ಮಸ್ಕಿ, ಮಾ,2: ರಾಜ್ಯ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿರುವ ಸುಮಾರು 56431 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ನ್ಯಾಯಲಯದ ಆದೇಶದ ನೆಪದಲ್ಲಿ ಹಳೆಯ ನೇಮಕಾತಿ ಪ್ರಕ್ರಿಯೆಯ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗಬೇಕಾದ ಒಳಮಿಸಲಾತಿಯನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಎಂಬ ಆತಂಕ ವ್ಯಕ್ತವಾಗಿದೆ. ಎಂದು ಮಸ್ಕಿ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು.
ಮಸ್ಕಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪುತ್ತಳಿ ಮುಂಭಾಗದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ
ಸೋಮವಾರ ರಾಜ್ಯ ಸರ್ಕಾರದಿಂದ ಒಳ ಮೀಸಲಾತಿ ತಾರತಮ್ಯ ಧೋರಣೆಯನ್ನು ಖಂಡಿಸಲಾಯಿತು. ಕೂಡಲೆ 17% ಮೀಸಲಾತಿ ಅನ್ವಯ ನೇಮಕಾತಿ ಮಾಡಬೇಕು.
ಅಂಕಿತ ಹಾಕಿದ ಒಳಮೀಸಲಾತಿಯ ಪ್ರಕಾರ ನೇಮಕಾತಿ ಮಾಡಬೇಕು.
SCP/TSP ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಬೇಕು.
ಕರ್ನಾಟಕ ರಾಜ್ಯದಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್‌ದಾಸ್ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯ ಒಳಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.
ಪೆಬ್ರುವರಿ 27ರಂದು ಸಚಿವ ಸಂಪುಟ ಸಭೆಯಲ್ಲಿ 56431 ಸರ್ಕಾರದ ಹುದ್ದೆಗಳ ಭರ್ತಿಗೆ ತೆಗೆದುಕೊಂಡ ನಿರ್ಧಾರವನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು.,5.ಹಳೆಯ ಒಳಮೀಸಲಾತಿಯ ಮೂಲಕ ನೇಮಕಾತಿ ಮಾಡಿಕೊಳ್ಳುವುದನ್ನು ಕೈಬಿಟ್ಟು ಹೊಸ ಒಳಮೀಸಲಾತಿಯ ಪ್ರಕಾರ ನೇಮಕ ಮಾಡಿಕೊಳ್ಳಬೇಕು.
ಎಂದು ಒತ್ತಾಯಿಸಿ ತಹಶೀಲ್ದಾರ ರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಚ್ ಬಿ.ಮುರಾರಿ ದೊಡ್ಡಪ್ಪ ಮುರಾರಿ,ಪುರಸಭೆ ಸದಸ್ಯರಾದ ದೊಡ್ಡ ಕರಿಯಪ್ಪ,ಮೌನೇಶ ಮುರಾರಿ,ಮಲ್ಲಯ್ಯ ಬಳ್ಳಾ,ಹನುಮಂತಪ್ಪ ಪರಾಪೂರು,ಹನುಮಂತಪ್ಪ ವೆಂಕಟಪೂರು,ಖಾಸಿಮಪ್ಪ ಮುರಾರಿ,ಕಿರಣ್ ಮುರಾರಿ,ಅಶೋಕ ಮುರಾರಿ,ಬಾಲಸ್ವಾಮಿ ಜಿನ್ನಾಪೂರು,ದಲಿತ ಯುವ ಮುಖಂಡರು ಸೇರಿದಂತೆ ಇತರರು ಭಾಗವಹಿಸಿದ್ದರು.
What's Your Reaction?



