ಪರೀಕ್ಷೆ ಎಂಬ ಹುಲಿಗೆ ಹೆದರಿ ಬಲಿಯಾಗುವ ಜಿಂಕೆಗಳು ನೀವಾಗಬೇಡಿ.ಅಮರೇಶ ಯಾದವ್ ಕಿವಿಮಾತು
ಮಸ್ಕಿ, ಫೆ 14:ಗಂಟೆಗೆ 90 ಕಿಲೋಮೀಟರ್ ವೇಗದಲ್ಲಿ ಓಡುವ ಜಿಂಕೆ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಓಡುವ ಹುಲಿ ಬೆನ್ನತ್ತಿದಾಗ ಹೆದರಿದ ಜಿಂಕೆ ಹುಲಿಗೆ ಆಹಾರವಾಗಿಬಿಡುತ್ತದೆ,ಅದರಂತೆ ಪರೀಕ್ಷೆ ಎಂಬ ಹುಲಿಗೆ ನೀವು ಹೆದರಿದರೆ ನೀವು ಅನುತ್ತೀರ್ಣರಾಗಿ ಬದುಕನ್ನೇ ಕಳೆದುಕೊಂಡು ಬಿಡುತ್ತೀರಿ.
ಯಾವುದಕ್ಕೂ ಹೆದರದೆ ಓದಿದ್ದನ್ನು ಮರೆಯದೆ ಧೈರ್ಯದಿಂದ ಬರೆದರೆ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪಾಲಕರಿಗೆ ಶಿಕ್ಷಕರಿಗೆ ಸಮಾಜಕ್ಕೆ ಕೀರ್ತಿ ತರುವ ಸಾಧಕರು ನೀವಾಗುತ್ತೀರಿ ಎಂದು ಮಸ್ಕಿ ತಾಲೂಕಾ ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್ ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.
ಶುಕ್ರವಾರ ಬೆಳಿಗ್ಗೆ ಮಸ್ಕಿಯ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಭವನದಲ್ಲಿ ನಡೆದ 2025,26, ನೇ ಸಾಲಿನ ಹತ್ತನೆ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಾಲಕರ,ಶಿಕ್ಷಕರ ಮತ್ತು ಆತ್ಮಸಾಕ್ಷಿ ಹೇಳಿದ ಮಾತುಗಳನ್ನು ಪಾಲಿಸಿದರೆ ಆದರ್ಶ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಮಾದರಿಯಾಗಲು ಸಾಧ್ಯವೆಂದು ಹೇಳಿದರು.
ನಂತರ ಮಾತನಾಡಿದ ಶಾಲೆಯ ಪ್ರಾಂಶುಪಾಲರು ಸರಕಾರದ ಸೌಲಭ್ಯಗಳನ್ನು ಪಡೆದು ಉತ್ತಮ ಸಾಧನೆಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಿ,ವಿದ್ಯಾರ್ಥಿ ಜೀವನ ಬಂಗಾರದ ಜೀವನ ಅದರ ಲಾಭ ಪಡೆದವರು ಜೀವನದಲ್ಲಿ ಕೀರ್ತಿವಂತರಾಗುತ್ತಾರೆಂದು ವಿದ್ಯಾರ್ಥಿ ಜೀವನದ ಮಹತ್ವವನ್ನು ಸಾರಿದರು.
ವಿದ್ಯಾರ್ಥಿಗಳು ಪಾಲಕರು, ಶಿಕ್ಷಕರು ಮತ್ತು ಆತ್ಮಸಾಕ್ಷಿ ಹೇಳಿದ ಮಾತುಗಳನ್ನು ಪಾಲಿಸಿದರೆ ಆದರ್ಶ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಮಾದರಿಯಾಗಬಹುದು ಎಂದು ಅವರು ತಿಳಿಸಿದರು.
ನಂತರ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ಸಮನ್ವಯಾಧಿಕಾರಿ ಅಮೀನ್ ಸಾಬ್, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರಾದ ಅಮರೇಶಗೌಡ ಪಾಟೀಲ್, ಹೇಮಣ್ಣ ಹಾದಿಮನಿ, ಮಹಾಂತೇಶ ತಾರಿವಾಳ, ಯಂಕೋಬ ದೇವಾಪುರ, ನಾಗಭೂಷಣ, ಪ್ರಕಾಶ ಹಾಗೂ ಪ್ರಭಾರಿ ಪ್ರಾಂಶುಪಾಲ ನಾಗೇಶ ಸಿ.ಟಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪಾಲಕರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.
What's Your Reaction?



