ಮಸ್ಕಿ ಗಾಂಧಿನಗರ ಸರ್ವೆ ನಂಬರ್ 7/1ರ 7 ಎಕರೆ ಪ್ರದೇಶದಲ್ಲಿ 296 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿ : ಹುಸೇನಪ್ಪ ಬಿ. ವಿಭೂತಿ ಒತ್ತಾಯ
ಮಸ್ಕಿ:ಡಿ19 ಗಾಂಧಿನಗರ ಸರ್ವೆ ನಂಬರ್ 7/1ರ 7 ಎಕರೆಯಲ್ಲಿ ಇರುವ ವಾರ್ಡ್ ನಂಬರ್ 23ರಲಿ ಸುಮಾರು ವರ್ಷ ಗಳಿಂದ ವಾಸ ಮಾಡುತ್ತಿರುವ 296 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧದ ಮುಂದೆ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭ ಜಿಲ್ಲಾ ಸಮಿತಿ ಪ್ರತಿಭಟನೆ ಮಾಡಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಎಮ್ ಎಲ್ ಸಿ ಬಸನಗೌಡ ಬಾದರ್ಲಿ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಸ್ಕಿ ಗಾಂಧಿನಗರ, ವಾರ್ಡ್ ನಂ.23ರಲ್ಲಿ ಬರುವಂತಹ ಸರ್ವೆ ನಂಬರ್ 7/1ರ 7 ಎಕರೆ ಪ್ರದೇಶವನ್ನು ಸ್ಲಂ ಬೋರ್ಡ್ ಎಂದು ದಿನಾಂಕ : 26-12-2019ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಯಾಗಿರುತ್ತದೆ. ಇದರ ಮೂಲ ಪ್ರಕಾರ ಹಳೆ ಪಹಣೆಯ ಪ್ರಕಾರ ಇನಾಮ್ ಭೂಮಿ ಎಂದು ನಮೂದಾಗಿರುತ್ತದೆ. ತದನಂತರದಲ್ಲಿ ಟ್ಯೂಬನಲ್ ಗೆಜೆಟ್ ನ ಪ್ರಕಾರ ಭೂಮಾಲಿಕರಿಗೆ ಮಾರಾಟ ಮಾಡಲು ಅನುಮತಿಯನ್ನು ನೀಡಲಾಗಿದೆ. ಮತ್ತು ಗುಲ್ಬಾರ್ಗಾ ಹೈಕೋರ್ಟ್ ಆದೇಶದನ್ವಯ ಕಲಂ ನಂ 11ರಲ್ಲಿ ವಕ್ಸ್ ಎಂದು ನಮೂದಾಗಿದ್ದು, ಹೈಕೋರ್ಟ್ ಆದೇಶದ ಮೇರೆಗೆ ಮಾನ್ಯ ರಾಯಚೂರು ಜಿಲ್ಲಾಧಿಕಾರಿಗಳು ಕಲಂ ನಂ.11ರಲ್ಲಿರುವ ವಕ್ಸ್ ಎಂದು ತೆಗೆದುಹಾಕಿರುತ್ತಾರೆ. ಹಾಗೂ ಮುಂದುವರೆದು ಭೂಮಾಲೀಕರಾದ ಖಾದರ್ ಬಿ ಗಂಡ ಶ್ಯಾಮಿದ್ ಸಾಬ್ ಖಾಜಿ ಇವರು ಅವುಗಳನ್ನು ಪ್ಲಾಟ್ಗಳಾಗಿ ಗುಂಟೆವಾರು ಮಾರಾಟವನ್ನು 7 ಎಕರೆ ಪ್ರದೇಶವನ್ನು 35 ವರ್ಷದಿಂದ 5000 ರಿಂದ 2,50,000/-ರವರೆಗೆ ಗುಂಟೆವಾರು ಅಲ್ಲಿರುವ ಬಡನಿವಾಸಿಗಳಿಗೆ ಮಾರಾಟವನ್ನು ಮಾಡಿರುತ್ತಾರೆ. ಇದರ ಪ್ರಯುಕ್ತ ದಿನಾಂಕ : 29-07-2024 ರಂದು ಅಲ್ಲಿ ವಾಸಿಸುವ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಯನ್ನು ಮಾಡುವ ದಿನಾಂಕ ನಿಗಧಿಪಡಿಸಿ ಸಚಿವಲಾಯದಿಂದ ಮೌಖಿಕ ಆದೇಶದನ್ವಯ ಹಕ್ಕು ಪತ್ರವನ್ನು ತಡೆಹಿಡಿದಿರುತ್ತಾರೆ. ತಾವು ಕೂಡಲೇ ಇದನ್ನು ತ್ವರಿತವಾಗಿ ಸಮಸ್ಯೆ ಪರಿಹರಿಸಿ
ಹಕ್ಕು ಪತ್ರ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭ ಜಿಲ್ಲಾ ಸಮಿತಿವತಿಯಿಂದ ಒತ್ತಾಯಿಸಿದರು.
ಈ ಸಂದರ್ಭದಲ್ಲಿ
ಈ ಸಂಧರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾಧ ರಾಜ್ಯದ್ಯಕ್ಷ ಬಿ ಎಲ್ ಹನುಮಂತಪ್ಪ ಕಾರ್ಯದರ್ಶಿ ನಾಗರಾಜ್ ವಕೀಲ ಜಂಟಿ ಕಾರ್ಯದರ್ಶಿ ಸಿಂಹಾದ್ರಿ ಸಿಂಧನೂರ್ ಯಮನೂರಪ್ಪ ಶ್ರೀನಿವಾಸ್. ಅಲೆಮಾರಿ ಸುಡುಗಾಡು ಸಿದ್ದ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಹುಸೇನಪ್ಪ ಬಿ ವಿಭೂತಿ ಮಸ್ಕಿ
ಸಂಘಟನೆ ಪದಾಧಿಕಾರಿಗಳು ಫಲಾನುಭವಿಗಳು ಉಪಸ್ಥಿತರಿದ್ದರು
What's Your Reaction?



