ಬಿಸಿಯೂಟ ಅಡುಗೆ ಕೇಂದ್ರಕ್ಕೆ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಅರ್ಹ ಫಲಾನುಭವಿಗಳಿಗೆ ಅರ್ಜಿ ಆಹ್ವಾನ.
ಅಕ್ಷರ ದಾಸೋಹ ಕಾರ್ಯಾಕ್ರಮದಡಿ ನಡೆಯುತ್ತಿರುವ ಮಧ್ಯಾಹ್ನ ಬಿಸಿಯೂಟ ಅಡುಗೆ ಕೇಂದ್ರಕ್ಕೆ ಖಾಲಿ ಇರುವ ಅಡುಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಅರ್ಹ ಫಲಾನುಭವಿಗಳಿಗೆ ಅರ್ಜಿ ಕರೆಯಲಾಗಿದೆ.
ಮಸ್ಕಿ, ಮಾ, 4: ಪಿ ಡಬ್ಲ್ಯೂ ಡಿ ಕ್ಯಾಂಪ್ ನ ಕರ್ನಾಟಕ ಪಬ್ಲಿಕ್ ಶಾಲೆಗೆ ಎರಡು ಸಹಾಯಕ ಅಡುಗೆದಾರರ ಹುದ್ದೆಗೆ ಅರ್ಜಿ ಕರೆದು ಸರ್ಕಾರದ ನಿಯಾಮಾನುಸಾರ (ಮಾರ್ಗಸೂಚಿ ಪ್ರಕಾರ) 1. ಹಿಂ.ವರ್ಗ 2.ಪ.ಜಾತಿ/ಪ.ಪಂಗಡ ಮಿಸಲಾತಿಗೆ ಆಯ್ಕೆಮಾಡಿ,
ಸ್ವೀಕರಿಸಿದ ಅರ್ಜಿಗಳ ಸಂಖ್ಯೆ. ಸಂದರ್ಶನ ನಡೆದ ದಿನದ ಠರಾವು ವಿವರಗಳೊಂದಿಗೆ ಅಂತಿಮವಾಗಿ ಆಯ್ಕೆಗೊಂಡ ಅಭ್ಯರ್ಥಿಗಳ ಈ ಮುಂದಿನ ದಾಖಲೆಗಳು (1) ಗ್ರಾಮ ಪಂಚಾಯತ್ ರರಾವು ಝರಾಕ್ಸ್ ಪ್ರತಿ (2) ವ್ಯಾಸಂಗ ಮಾಡಿದ ದಾಖಲೆ (ಮುಖ್ಯ ಅಡುಗೆದಾರಳ ಹುದ್ದೆಗೆ ಮಾತ್ರ) (3) ಜಾತಿ ಪ್ರಮಾಣ ಪತ್ರ. (4) ಆದಾಯ ಪ್ರಮಾಣ ಪತ್ರ (5) ವಿಧವೆ ಆಗಿದಲ್ಲಿ ಪ್ರಮಾಣ ಪತ್ರ (6) ವೈದ್ಯರಿಂದ ಸದೃಡ ಪ್ರಮಾಣ ಪತ್ರ (7) ಅಂಗವಿಕಲರೇ ಪ್ರತಿಶತಃ ಸಹಿತ ವೈದ್ಯರಿಂದ ಪ್ರಮಾಣ ಪತ್ರ (8) 2 ಪೋಟೋ (9) ರೇಷನ್ ಕಾರ್ಡ್ (10) ವೋಟರ್ ಕಾರ್ಡ (11) ಅಧಾರ ಕಾರ್ಡ (12) ವಾಸ ಸ್ಥಳದ ಪ್ರಮಾಣ ಪತ್ರ ಹೀಗೆ ಮೂಲ ಪ್ರತಿಗಳಲ್ಲಿ ಒಂದು ಮತ್ತು ನಕಲು ಝರಾಕ್ಸ್ ದೃಢೀಕೃತ ಪ್ರತಿಯಲ್ಲಿ ಒಟ್ಟು 2 ಪ್ರತಿ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ
ಮುಖ್ಯ ಗುರುಗಳಾದ ಚಂದ್ರಶೇಖರ್ 990179302 ಅಥವಾ ಶಿಕ್ಷಕರಾದ ಅರುಣ್ ಸರ್ 8073454897ಇವರಿಗೆ ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
What's Your Reaction?



