ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಲ್ಲು ಜೈ ಕರುನಾಡು ರಕ್ಷಣಾ ಸೇನೆ ಮುಖಂಡ ಬಸವಂತ ಹಿರೇಕಡಬೂರು ಆಗ್ರಹ..!
ಮಸ್ಕಿ, ಫೆ:21, ಶನಿವಾರ ಜೈ ಕರುನಾಡು ರಕ್ಷಣಾ ಸೇನೆ ಸಂಘಟನೆಯ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಬಸವಂತ ಹಿರೇಕಡಬೂರು ಮಸ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಲ್ಲು ಶಾಸಕ ಆರ್ ಬಸನಗೌಡ ತುರುವಿಹಾಳ ಹಾಗೂ ತಹಸೀಲ್ದಾರರವರಿಗೆ ಮನವಿ ಪತ್ರ ಸಲ್ಲಿಸಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಲ್ಲು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿರುವ ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ಆರೋಗ್ಯ ತಪಾಸಣೆ ಯಂತ್ರಗಳ ಕೊರತೆ ಇದ್ದು, ಮತ್ತು ಮಸ್ಕಿ ಪಟ್ಟಣ ಹಾಗೂ ಮಸ್ಕಿ ಸುತ್ತಮುತ್ತಲಿನ ಸಾರ್ವಜನಿಕರಿಗೆ ಸರಿಯಾದಂತಹ ಆರೋಗ್ಯ ಸೇವೆ ಸಿಗದೇ ಪರದಾಡುವಂತಾಗಿದೆ.
ಬಿದರ್ ಟು ಶೀರಿರಂಗಪಟ್ಟಣ ಏನ್ ಎಚ್ 150ಎ ಮುಖ್ಯ ರಸ್ತೆಯು ಮಸ್ಕಿ ಪಟ್ಟಣದಿಂದ ಹಾದುಹೋಗಿರುವ ಕಾರಣ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅಪಘಾತಕ್ಕೀಡಾದ ರೋಗಿಯನ್ನು ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರು
ಆರೋಗ್ಯ ತಪಾಸಣೆ ಯಂತ್ರಗಳ ಕೊರತೆಯಿಂದ ಆ 'ರೋಗಿಯನ್ನು ಹತ್ತಿರದ ಸಿಂಧನೂರು ಅಥವಾ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ಕರೆದೋಯುವ ಮುಂಚೆಯೇ ಮರಣ ಹೊಂದಿರುವ ಉದಾಹರಣೆಗಳು ಸಾಕಷ್ಟಿವೆ ಅದೇ ರೀತಿ ಮಹಿಳೆಯರ ಹೆರಿಗೆಯ ಸಂದರ್ಭದಲ್ಲಿ ಪ್ರಸ್ತುತ ಇರುವ ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ಸೇವೆ ಸಿಗದೇ ಇರುವ ಕಾರಣ ಸಾಲ-ಸೋಲ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದ ನಂತರ ಪಡೆದ ಸಾಲ ತೀರಿಸಲು ಬೆಂಗಳೂರು, ಪುಣೆ, ಗೋವಾ ಇತರೆ ಪಟ್ಟಣ ಪ್ರದೇಶಗಳಿಗೆ ದುಡಿಯಲು ವಲಸೆ ಹೋಗುತ್ತಿದ್ದಾರೆ. ಇದರಿಂದ ಬಡತನದ ಕಾರಣದಿಂದ ಚಿಕ್ಕ ಮಕ್ಕಳು ಶಾಲೆಗಳಿಗೆ ಹೋಗದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಪ್ರಸ್ತುತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೆಗಡಿ, ಕೆಮ್ಮು, ಜ್ವರ, ಮಾತ್ರೆಗಳು ಬಿಟ್ಟು ಬೇರೆ ಯಾವುದೇ ಚಿಕಿತ್ಸೆ ಅಥವಾ ಮಾತ್ರೆಗಳು ಆಸ್ಪತ್ರೆಯಲ್ಲಿ ಸಿಗದೇ ಜನಸಾಮಾನ್ಯರ ಗೋಳು ಹೇಳುತೀರದಾಗಿದೆ.
ಆದರಿಂದ ಈ ಕೂಡಲೆ ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ ತಾಲೂಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಅನಿರ್ಧಿಷ್ಟಾವದಿ ಧರಣಿ ಮಾಡಲಾಗುವುದು ಎಂದು ಮನವಿಯಲ್ಲಿ ತಿಸಿದ್ದಾರೆ.
ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ ತಾಲೂಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಜನಪ್ರತಿನಿಧಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ. ಸಾರ್ವಜನಿಕರ ಅಭಿಪ್ರಾಯ
ಬಹು ವರ್ಷಗಳ ಬೇಡಿಕೆ ಮಸ್ಕಿ ಕ್ಷೇತ್ರದ ಸಾರ್ವಜನಿಕರಿಗೆ ಮುಖ್ಯವಾಗಿ ತಾಲೂಕ ಆಸ್ಪತ್ರೆಯ ಕೊರತೆ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೂ ಇದ್ದರು ಸಹ ಇದುವರೆಗೂ ತಾಲೂಕ ಆಸ್ಪತ್ರೆಯನ್ನಾಗಿ ಮೇಲ್ ದರ್ಜೆಗೇರಿಸಲು ನಿರ್ಲಕ್ಷ ತೋರುತ್ತಿರುವುದರ ಬಗ್ಗೆ ಜನಪ್ರತಿನಿಧಿಕಾರಿಗಳು ಖಾಸಿಗೆ ಆಸ್ಪತ್ರೆಗಳ ಮಾಲೀಕರ ಜೊತೆ ಹೊಂದಾಣಿಕೆಯಾಗಿದೆಯಾ ಎಂಬ ಹಲವು ಅನುಮಾನಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿವೆ.
ಹೇಳಿಕ್ಕೆ..
ಮಸ್ಜಿ ಶಾಸಕ ಆರ್ ಬಸನಗೌಡ ತುರುವಿಹಾಳ
ಮೊನ್ನೆ ನಡೆದಿರುವ ಅಧಿವೇಶನ ದಲ್ಲಿ ಮಸ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಪ್ರತ್ಯೇಕ ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಕರೆಯಲಾಗಿದೆ ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಶೀಘ್ರವೇ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.
ಹೇಳಿಕ್ಕೆ.. ಮಸ್ಕಿ ತಹಸೀಲ್ದಾರ್ ಮಂಜುನಾಥ್ ಬೋಗವತಿ
ಲ್ಯಾಂಡ್ ಸಮಸ್ಯೆ ನ್ಯಾಯಾಲಯದಲ್ಲಿ ಇರುವುದರಿಂದ ಭೂಸಾದಿನ ಅಂತಿಮ ಹಂತದಲ್ಲಿದ್ದು ಈಗಾಗಲೇ ಅಂತಿಮ ನೋಟಿಸ್ ಭೂ ಮಾಲೀಕರಿಗೆ ಕೊಟ್ಟಿದ್ದೇವೆ. ಈದಾದ ತಕ್ಷಣ
ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ.
What's Your Reaction?



