ಮಸ್ಕಿ ಪುರಸಭೆಯಿಂದ ಆಶ್ರಯ (ನವಗ್ರಾಮ) ಯೋಜನೆ ಫಲಾನುಭವಿಗಳಿಗೆ ಮಹತ್ವದ ಪ್ರಕಟಣೆ
ಮಸ್ಕಿ, ಫೆ.21: ಮಸ್ಕಿ ಪುರಸಭೆ ವ್ಯಾಪ್ತಿಯ ಲಿಂಗಸಗೂರು ರಸ್ತೆಯ ಆಶ್ರಯ ಯೋಜನೆ (ನವಗ್ರಾಮ ಯೋಜನೆ) ಫಲಾನುಭವಿಗಳಿಂದ ಮೂಲ ದಾಖಲೆಗಳನ್ನು ಪಡೆಯಲು ಪುರಸಭೆ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಈ ಹಿಂದಿನ ಗ್ರಾಮ ಪಂಚಾಯಿತಿ ಅವಧಿಯಲ್ಲಿ ಆಶ್ರಯ ಯೋಜನೆ (ನವಗ್ರಾಮ ಯೋಜನೆ) ಅಡಿಯಲ್ಲಿ ಆಯ್ಕೆಗೊಂಡ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಆದರೆ ಆ ಅವಧಿಯಲ್ಲಿ ನಿರ್ಮಿಸಲಾದ ಮನೆಗಳಲ್ಲಿ ಫಲಾನುಭವಿಗಳು ವಾಸವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿತ ಸಕ್ಷೆಮ ಪ್ರಾಧಿಕಾರದಿಂದ ಅನುಮತಿ ಪಡೆದು, ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ನೆಲಸಮಗೊಳಿಸಿ, ಹಿಂದಿನ ಗ್ರಾಮ ಪಂಚಾಯಿತಿ ಅವಧಿಯಲ್ಲಿ ನೀಡಲಾದ ಅಳತೆಯಂತೆ ಪುನಃ ವಿನ್ಯಾಸ ರೂಪಿಸಿ, ಹೊಸದಾಗಿ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ತಿಳಿಸಿದೆ.
ಈ ಪ್ರಕ್ರಿಯೆಗಾಗಿ ಈಗಾಗಲೇ ಹಕ್ಕುಪತ್ರ ಪಡೆದ ಫಲಾನುಭವಿಗಳು ತಮ್ಮ ಮೂಲ ಹಕ್ಕುಪತ್ರದ ಜೊತೆಗೆ ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುವುದರ ವಾಸಸ್ಥಳ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪುರಸಭೆ ಕಚೇರಿಗೆ ಸಲ್ಲಿಸಬೇಕಾಗಿದೆ.
ಸದರಿ ದಾಖಲೆಗಳನ್ನು ದಿನಾಂಕ 18/03/2026ರೊಳಗಾಗಿ ಕಚೇರಿ ಸಮಯದಲ್ಲಿ ಕರಣಿಕರಾದ ಮಲ್ಲೇಶರವರಿಗೆ ಸಲ್ಲಿಸಲು ಕೋರಲಾಗಿದೆ.
What's Your Reaction?



