ಶಿವಯೋಗಿ ಸಿದ್ಧರಾಮೇಶ್ವರ ಸಮಾನತೆ ತತ್ವಪದದ ಲೋಕ ಕಲ್ಯಾಣಿ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಶಿವಯೋಗಿ ಸಿದ್ಧರಾಮೇಶ್ವರರ 854ನೇ ಜಯಂತಿ ಅದ್ದೂರಿ

Feb 17, 2026 - 03:25
Feb 17, 2026 - 03:29
 0  14

ಮಸ್ಕಿ, ಫೆ.16:ಶಿವಯೋಗಿ ಸಿದ್ದರಾಮೇಶ್ವರರು ಸಾಮಾಜಿಕ ಸಮಾನತೆ, ಕಾಯಕ ತತ್ವ ಮತ್ತು ಲೋಕ ಕಲ್ಯಾಣವನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕರು. "ಕಾಯಕವೇ ಕೈಲಾಸ" ಎಂಬ ತತ್ವದಡಿ ಬದುಕಿದ ಅವರು, ಕೆರೆ-ಕಟ್ಟೆಗಳನ್ನು ನಿರ್ಮಿಸುವ ಮೂಲಕ ಶ್ರಮ ಸಂಸ್ಕೃತಿಯನ್ನು ಎತ್ತಿಹಿಡಿದರು. ಅವರ ವಚನಗಳು ಮೂಢನಂಬಿಕೆ ತೊರೆದು, ಶೋಷಣೆಯಿಲ್ಲದ ಸಮ ಸಮಾಜ ನಿರ್ಮಿಸುವ ಸಂದೇಶವನ್ನು ಇಂದಿಗೂ ಸಾರುತ್ತಿವೆ ಎಂದು ಬಾಗಲಕೋಟೆ ಚಿತ್ರದುರ್ಗದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಸೋಮವಾರ ಮಸ್ಕಿಯ ಬೋವಿ ವಡ್ಡರ್ ಸಮಾಜದ ವತಿಯಿಂದ  ಸಿದ್ಧರಾಮೇಶ್ವರ ಹಾಗೂ ಬೆಳವಾಡಿ  ವಡ್ಡರ್ ಯಲ್ಲಣ್ಣ  ಜಯಂತಿಯು 

ಭವ್ಯ ಮೆರವಣಿಗೆ ನಗರದ ಕವಿತಾಳ ರಸ್ತೆಯಲ್ಲಿಯಿರುವ ಸಿದ್ಧರಾಮೇಶ್ವರ ವೃತ್ತ ದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ಬಿದಿಗಳ ಮೂಲಕ   ಭ್ರಮರಾಂಬ ದೇವಸ್ಥಾನದ  ಕಾರ್ಯಕ್ರಮದ ವೇದಿಕೆಯವರೆಗೂ ಸಿದ್ಧರಾಮೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. 

ಮಸ್ಕಿ ಪಟ್ಟಣದ ಸಿದ್ಧರಾಮೇಶ್ವರ ಜಯಂತ್ಯೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು,ಒಳಮೀಸಲಾತಿಯಲ್ಲೇ ಒಳಮೀಸಲಾತಿಯನ್ನು ಪ್ರಬಲವಾಗಿ ವಿರೋಧಿಸಬೇಕು. ಈಗ ಮಾಡಿರುವ ವಿಧೇಯಕ ಮಲತಾಯಿಧೋರಣೆಯಾಗಿದ. ರೋಷ್ಟರ್ ಪದ್ಧತಿ ಅತ್ಯಂತ ಮಾರಕವಾಗಿದೆ. ಅವೈಜ್ಞಾನಿಕವಾಗಿದೆ. ಈ ಕಾರಣದಿಂದ ಸರ್ಕಾರದ ವಿರುದ್ಧ ಪ್ರತಿಭಟಿಸಲು ಭೋವಿ ಸಮಾಜಕ್ಕೆ ಕರೆ ನೀಡಿದರು.

 ಕಾರ್ಯಕ್ರಮದ ಮೆರವಣಿಗೆಯಲ್ಲಿ ಶಾಸಕ ಆರ್.ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಜಯಂತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಸ್ಕಿಯ ಗಚ್ಚಿನ ಮಠದ ಶ್ರೀಗಳು, ಇರಕಲ್ ಮಠದ ಬಸವಪ್ರಸಾದ ಶರಣರು, ಹಡಪದ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು, ಶಿಕಾರಿಪುರದ ಚನ್ನಬಸವ ಶ್ರೀಗಳು ಸಾನ್ನಿಧ್ಯವಹಿಸಿದ್ದರು. 

 ಈ ಸಂದರ್ಭದಲ್ಲಿ  ಭೋವಿ ವಡ್ಡರ್ ಸಮುದಾಯದ ಮುಖಂಡರು ಮಹಿಳೆಯರು ಯುವಕರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow