ಕಾನೂನು ಪರಿಪಾಲನೆ ಅಗದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ: ಡಿ ವೈ ಎಸ್ ಪಿ ದತ್ತಾತ್ರೆ ಕಾರ್ನಾಡ್

ಮಸ್ಕಿ, ಮಾ 18: ನಗರದಲ್ಲಿ ಈ ಹಿಂದೆ ಯಾವುದೇ ಅಹಿತಕರ ಘಟನೆ ಕಂಡುಬಂದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ  ಪರಿಸ್ಥಿತಿ ಸರಿಯಿಲ್ಲ. ಯಾವುದೇ ಬ್ಯಾನರ್ ಹಾಕುವ ಮೊದಲು ನಮ್ಮ ಗಮನಕ್ಕೆ ತರಬೇಕು. ಕಾನೂನು ಪರಿಪಾಲನೆ ಅಗದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಮಾಧ್ಯಮ ಜನರಲ್ಲಿ ಕ್ರೋಧ ಉಂಟುಮಾಡುತ್ತದೆ.   

Mar 19, 2026 - 05:29
 0  1
ಕಾನೂನು ಪರಿಪಾಲನೆ ಅಗದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ: ಡಿ ವೈ ಎಸ್ ಪಿ ದತ್ತಾತ್ರೆ ಕಾರ್ನಾಡ್
ವರದಿ : ✍️ಹುಚ್ಚೇಶ್ ನಾಗಲೀಕರ್
ಕಾನೂನು ಪರಿಪಾಲನೆ ಅಗದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ: ಡಿ ವೈ ಎಸ್ ಪಿ ದತ್ತಾತ್ರೆ ಕಾರ್ನಾಡ್

ಜನರು ಕಾನೂನಿಗೆ ಸಹಕಾರ ನೀಡಬೇಕು. ಸಮಾಜದಲ್ಲಿ ಅಶಾಂತಿ ಹರಡಲು ಬಹಳ ಸಮಯ ಬೇಕಾಗುವುದಿಲ್ಲ. ಯುವಕರಲ್ಲಿ ಒಂದು ಹುಚ್ಚುತನ  ಇರುತ್ತದೆ. ಸಂಬಂಧ ಇಲದೆ  ಜಗಳದಲ್ಲಿ ಪಾಲ್ಗೊಳುವ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ನಮ್ಮ ಗಮನಕ್ಕೆ ತನ್ನಿ. ಎಲ್ಲರೂ ಶಾಂತರೀತಿಯಿಂದ ಹಬ್ಬ ಆಚರಣೆಯನ್ನು ಮಾಡೋಣ, ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚೋದು ಬೇಡ ಎಲ್ಲರೂ ಕೂಡಿ ಹಬ್ಬವನ್ನು ಶಾಂತಿಯಿಂದ ಆಚರಿಸೋಣ ಎಂದರು.

ಮಸ್ಕಿ  ಪೊಲೀಸ್ ಠಾಣೆಯಲ್ಲಿ ರಂಜಾನ್ ಮತ್ತು ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಲಾಯಿತು,  ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಮುಖಂಡರು ಯುವಕರು ಪಾಲ್ಗೊಂಡಿದ್ದರು ಶಾಂತಿ ಸಭೆಯನ್ನು ಉದ್ದೇಶಿಸಿ

ಸಿಪಿಐ ರಾಮಣ್ಣ ಜಲಿಗೆರ್   ಮಾತನಾಡಿ ಮಸ್ಕಿಯಲ್ಲಿ ಭಾವೈಕ್ಯತೆಯಿಂದ ಇರುತ್ತಾರೆ ಆದರೆ ಕೆಲ ಯುವಕರು ಕುಂಟು ನೆಪ ಇಟ್ಟುಕೊಂಡು ಪುಂಡಾಟಿಕೆ ಮಾಡುತ್ತಾರೆ. ಇಂತಹವರ ವಿರುದ್ಧ ಕ್ರಮ  ಕೈಗೊಳ್ಳಲಾಗುವುದು. ಹಿರಿಯರು ತಮ್ಮ ಮಕ್ಕಳಿಗೆ ಚೇಷ್ಟೆ ಮಾಡದಂತೆ ಬುದ್ದಿ ಮಾತು ಹೇಳಿ, ಮುಂದೆ ಬರುವಂತಹ ಹಬ್ಬವನ್ನು ಸಂತೋಷದಿಂದ ಆಚರಿಸಿ ಎಂದು ಹೇಳಿದರು.

ನಂತರ ಹಿರಿಯ ಮುಖಂಡರು ಮಹಾದೇವಪ್ಪ ಗೌಡ ಮಾತನಾಡಿ ಮಸ್ಕಿಯಲ್ಲಿ ಯಾವುದೇ ರೀತಿಯ ಗಲಾಟೆಗಳು ನಡೆದಿಲ್ಲ, ಮುಂದೆ ನಡೆಯುವುದಿಲ್ಲ. ಪೋಲೀಸರೇ ಎಲ್ಲಾ ನಿಯಂತ್ರಣ ಮಾಡಬೇಕೆಂದರೆ ಕಷ್ಟ ಹಾಗಾಗಿ ನಾವೇ ಸ್ವಯಂ ಪ್ರೇರಣೆಯಿಂದ ಶಾಂತಿ ಕಾಪಾಡಬೇಕು. ಇಲ್ಲದೇ ಹೋದರೆ ಊರಿನ ಹೆಸರು ಕೆಟ್ಟು ಹೋಗುತ್ತದೆ ಎಂದು ಹೇಳಿದರು.

ಜಾತ್ರೆ, ಹಬ್ಬಗಳು ಸೇರಿದಂತೆ  ಊರಿನಲ್ಲಿ ಇದುವರೆಗೂ ಯಾವುದೇ ದುರ್ಘಟನೆ ಸಂಬವಿಸಿಲ್ಲ. ಶುಕ್ರವಾರ ಹೋಳಿ ಆಚರಿಸಲಾಗುತ್ತದೆ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಮುಸ್ಲಿಂ ಬಾಂಧವರು  ಸಾಯಂಕಾಲ ಚಂದ್ರ ದರ್ಶನ ಆದರೆ ಶನಿವಾರ ಹಬ್ಬ ಆಚರಿಸಲಾಗುತ್ತದೆ. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ.

ಈ ಸಮಯದಲ್ಲಿ ಸ್ವಲ್ಪ ಜನದಟ್ಟಣೆ ಇರುತ್ತದೆ ಇದಕ್ಕೆ ಪೋಲೀಸರು ಅನುಕೂಲ ಮಾಡಿಕೊಟ್ಟು ಹಿಂದು ಮುಸ್ಲಿಂ ರು ಸಂತೋಷದಿಂದ ಹಬ್ಬಗಳನ್ನು ಆಚರಿಸಲು ಅನುವು ಮಾಡಿಕೊಡಬೇಕೆಂದು  ಧರ್ಮ ಗುರು  ಜಿಲಾನಿ ಖಾಜಿ ಹೇಳಿದರು.

ಸಭೆಯಲ್ಲಿ ಮೌನೇಶ್ ಮುರಾರಿ, ಸಾರಪ್ಪ, ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿ, ಪುರಸಭೆ ಸದಸ್ಯ ರವಿಗೌಡ ಪಾಟೀಲ್ ಚೇತನ್ ಪಾಟೀಲ್, ದೊಡ್ಡ ಕರಿಯಪ್ಪ, ಮಸೂದ್ ಪಾಷಾ, ರಜಾಕ್ ಸಾಬ್, ಮಾಜಿ ಪುರಸಭೆ ಅಧ್ಯಕ್ಷ ಅಂಬಾಡಿ ಮಲ್ಲಯ್ಯ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಯುವಕರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow