ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಿ||ಕಾನೂನು ಮೀರಿ ವರ್ತಿಸಿದರೆ ಯಾವುದೇ ಮುಲಾಜಿಲ್ಲದೆ ಕಾನೂನಿನ ಕ್ರಮ:ಕೆ. ರಂಗಯ್ಯ
ಮಸ್ಕಿ, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಹೋಳಿ ಮತ್ತು ರಂಜಾನ್ ಹಬ್ಬದ ಅಂಗವಾಗಿ ಶಾಂತಿ ಸಭೆ ನಡೆಯಿತು.
ಯಾವುದೇ ಹಬ್ಬಗಳಿರಲಿ ಹಿಂದೂ-ಮುಸ್ಲಿಂರು ಭಾವೈಕತೆಯಿಂದ ಆಚರಿಸಿದಾಗ ಮಾತ್ರ ಹಬ್ಬಗಳು ಯಶಸ್ವಿಯಾಗುತ್ತವೆ ಎಂದು ಪಿಎಸ್‌ಐ ಕೆ. ರಂಗಯ್ಯ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳ ಹಬ್ಬಗಳನ್ನು ಪ್ರತಿಯೊಬ್ಬರು ಸಹೋದರತ್ವ ಭಾವನೆಗಳನ್ನು ಇಟ್ಟುಕೊಂಡು ಹಬ್ಬಗಳನ್ನು ಆಚರಿಸಬೇಕು. ಸಾರ್ವಜನಿಕ ಸ್ಥಳ ಗಳಲ್ಲಿ ಕಾನೂನು ಮೀರಿ ವರ್ತಿಸಿದರೆ ಯಾವುದೇ ಮುಲಾಜಿಲ್ಲದೆ ಕಾನೂನಿನ ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬರೂ ಸಹ ಹಿರಿಯರ ಮಾರ್ಗದ ದರ್ಶನದಂತೆ ನಡೆದುಕೊಳ್ಳಬೇಕು. ಈ ಹಿಂದಿನಿಂದಲೂ ಹಿರಿಯರು ಪಟ್ಟಣದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಈ ಸೌಹಾರ್ದತೆಯನ್ನು ಮುಂದಿನ ಯುವಪೀಳಿಗೆ ಯೂ ಸಹ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕೆಂದರು. ಪ್ರತಿಯೊಂದು ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಿ ಅದಕ್ಕೆ ಬೇಕಾದ ಪೊಲೀಸ್ ಬಂದೋಬಸ್ತನ್ನು ಇಲಾಖೆ ವತಿಯಿಂದ ಕೈಗೊಳ್ಳ ಲಾಗುವುದು ಒಂದು ವೇಳೆ ಕಾನೂನು ಮೀರಿ ಯಾರಾದರೂ ನಡೆದುಕೊಂಡರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮುಸ್ಲಿಂ ಧರ್ಮ ಗುರು ಜಿಲಾನಿ ಖಾಜಿ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಊರಿನ ಹಿರಿಯರಾದ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್, ಹಿರಿಯ ಪತ್ರಕರ್ತ ಅಬ್ದುಲ್ ಅಜೀಜ್, ಪುರಸಭೆ ಸದಸ್ಯ ಮೌನೇಶ್ ಮುರಾರಿ, ಮೌನೇಶ ನಾಯಕ ಮಾತನಾಡಿದರು.
ಈ ಸಂದರ್ಭದಲ್ಲಿ ಎಲ್ಲ ಸಮುದಾಯದ ಯುವಕರು, ಮುಖಂಡರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
What's Your Reaction?



